ಕಣ್ಣೂರು: ಪುಸ್ತಕಗಳಿಂದ ಕೂಡಿದ ರೂಂಗೆ ನೀವು ಗ್ರಂಥಾಲಯ ಅಥವಾ ಲೈಬ್ರರಿ ಎನ್ನಬಹುದು. ಆದರೇ ಪುಸ್ತಕವೇ ಕಟ್ಟಡವಾದರೇ? ಹೌದು ಇಂತಹದೊಂದು ಸುಂದರ ಕಲ್ಪನೆಯೂ ಕಟ್ಟಡದ ರೂಪ ತಳೆದಿದ್ದು ಕೇರಳದಲ್ಲಿ.
ಕೇರಳದ ಪಯ್ಯನ್ನೂರಿನ ಸನಿಹದ ಕರಾಯಿಲ್’ನಲ್ಲಿರುವ ಈ ಗ್ರಂಥಾಲಯವನ್ನು, ಪುಸ್ತಕಗಳನ್ನು rackನಲ್ಲಿ ಜೋಡಿಸಿದ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಲಾಲ್ ಬಹಾದ್ದೂರ್ ವಾಯನಸಾಲ ಹಾಗೂ ಗ್ರಂಥಾಲಯ ಹೆಸರಿನ ಈ ಲೈಬ್ರರಿಯನ್ನು ವಿನೂತನ ಪ್ಲ್ಯಾನ್ನಲ್ಲಿ ಸಿದ್ಧಪಡಿಸಲಾಗಿದೆ.
ಕೆಕೆಆರ್ ವೆಂಗಾರಾ ಸಿದ್ಧಪಡಿಸಿದ ಈ ಹೊಸ ಬಗೆಯ ಸ್ಕೆಚ್’ಗೆ, ಸ್ಥಳೀಯ ಕಲಾವಿದ ಸಿವಿ ಶ್ರೀಧರನ್ ಜೀವ ತುಂಬಿದ್ದಾರೆ. ಇದರ ಫಲವಾಗಿ ಬಣ್ಣ-ಬಣ್ಣದ ಮುಖಪುಟ ಹೊಂದಿರುವ ಪುಸ್ತಕ ಜೋಡಿಸಿದಂತೆ ಕಾಣುವ ಗ್ರಂಥಾಲಯದ ಕಟ್ಟಡ ಓದುಗರನ್ನು ಸೆಳೆಯುತ್ತಿದೆ.
ಈ ಲೈಬ್ರರಿಯನ್ನು ವಿವಿಧ ಸೈಜ್’ನ ಇಟ್ಟಿಗೆ, ಟೈಲ್ಸ್, ಸಿಮೆಂಟ್ ಎಲ್ಲವನ್ನೂ ಬಳಸಿ ಸಿದ್ಧಪಡಿಸಲಾಗಿದ್ದು, ವಿವಿಧ ಸೈಜ್’ನ ಪುಸ್ತಕಗಳನ್ನು ಜೋಡಿಸಿದಂತೆ ಕಟ್ಟಡ ಸಿದ್ಧವಾಗಿದೆ ಎಂದು ಗ್ರಂಥಾಲಯದ ಅಧ್ಯಕ್ಷ ಅಪ್ಪಕುಟ್ಟನ್ ಕರಾಯಿಲ್ ಮಾಹಿತಿ ನೀಡಿದ್ದಾರೆ.
ಈ ಗ್ರಂಥಾಲಯ 2019ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿದ್ದು, ಸ್ಥಳೀಯ ಪ್ರಸಿದ್ಧ ಬರಹಗಾರ ಎನ್. ಪ್ರಭಾಕರನ್ ಉದ್ಘಾಟಿಸಿದ್ದಾರೆ. ಈ ಗ್ರಂಥಾಲಯ 5 ಸಾವಿರ ಪುಸ್ತಕಗಳನ್ನು ಹೊಂದಿದೆ. ಈ ಕಟ್ಟಡದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದು ‘ಪುಸ್ತಕ’ವೇ ಸೃಷ್ಟಿಸಿದ ಲೈಬ್ರರಿ…!
Follow Us