NEWSICS.COM
ರಾಜಸ್ಥಾನ: ರಾಜಸ್ಥಾನದ ಜುಂಜುನು ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ರೈತನ ಮೂವರು ಹೆಣ್ಣುಮಕ್ಕಳು ಒಂದೇ ವೇದಿಕೆಯಲ್ಲಿ ಪಿಹೆಚ್’ಡಿ ಪದವಿ ಪಡೆದಿದ್ದಾರೆ.
ಹಳ್ಳಿಯಲ್ಲಿ ಕಷ್ಟಪಟ್ಟು ರಾತ್ರಿ ಭೂಮಿ ಉಳುಮೆ ಮಾಡಿ, ಬೆಳಿಗ್ಗೆ ಶೂ ಅಂಗಡಿಯಲ್ಲಿ ಕೆಲಸ ಮಾಡುವ ರೈತನ ಮಕ್ಕಳ ಸಾಧನೆ ಎಲ್ಲರ ಮೆಚ್ಚುಗೆ ಪಡೆದಿದೆ. ಮೂವರು ಹೆಣ್ಣುಮಕ್ಕಳಾದ
ಸರಿತಾ ತಿಲೋಟಿಯಾ-ಭೌಗೋಳಿಕ ವಿಷಯದಲ್ಲಿ, ಕಿರಣ್ ತಿಲೋಟಿಯ್-ರಸಾಯನ ಶಾಸ್ತ್ರದಲ್ಲಿ, ಅನಿತಾ ತಿಲೋಟಿಯಾ ಶಿಕ್ಷಣ ವಿಭಾಗದಲ್ಲಿ ಪಿಹೆಚ್’ಡಿ ಪಡೆದಿದ್ದಾರೆ.
ದೇಶದಲ್ಲಿ ಈ ರೀತಿಯ ಸಾಧನೆ ಎರಡನೇ ಬಾರಿಯಾಗಿದ್ದು, ಮೂವರಿಗೂ ಒಂದೇ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಈ ಹಿಂದೆ ಮಧ್ಯಪ್ರದೇಶ ಮೂವರು ಸಹೋದರಿಯರಿಗೆ ಒಂದೇ ವೇದಿಕೆಯಲ್ಲಿ ಪಿಹೆಚ್’ಡಿ ನೀಡಲಾಗಿತ್ತು. ಈಗ ಈ ಮೂವರು ಸಹೋದರಿಯರಿಗೆ ಜಗದೀಶ್ ಪ್ರಸಾದ್ ಝಬರ್ ಮರ್ಲ್ ತಿಬೆರ’ವಾಲಾ ವಿವಿ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.