newsics.com
ನಾಗ್ಪುರ: ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿ ಎಸೆಯುವುದು ಆಕೆಯನ್ನು ಅವಮಾನಿಸಿದಂತೆ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀರ್ಪು ನೀಡಿದೆ..
ಮಹಿಳೆಯ ಒಳ್ಳೆಯತನವನ್ನು ದುರುಪಯೋಗಪಡಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಘನತೆ ಎಂಬುದು ಮಹಿಳೆಯ ಅತ್ಯುತ್ತಮ ಆಭರಣ ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರದ ಅಕೋಲಾದಲ್ಲಿ 2011ರಲ್ಲಿ ಈ ಘಟನೆ ನಡೆದಿತ್ತು,. ಶ್ರೀಕೃಷ್ಣ ತವರಿ ಎಂಬಾತ ಪ್ರೇಮಪತ್ರ ನೀಡಲು ಬಂದಿದ್ದಾಗ ಮಹಿಳೆಯೊಬ್ಬರು ಅದನ್ನು ನಿರಾಕರಿಸಿದ್ದರು. ಬಳಿಕ ಲವ್ ಲೆಟರ್ ಎಸೆದು ಪ್ರೇಮ ನಿವೇದನೆ ಮಾಡಿದ್ದ.
ಈ ,ಸಂಬಂಧ , ಸೆಷನ್ಸ್ ನ್ಯಾಯಾಲಯದಲ್ಲಿ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಶ್ರೀಕೃಷ್ಣಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು.
ಕೆಳ ನ್ಯಾಯಾಲಯದ ಶಿಕ್ಷೆಯನ್ನು ಆರೋಪಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದ. ಇದೀಗ ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.