ಜೈಪುರ: ರಾಜಸ್ತಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಿನ್ನಮತೀಯ ಶಾಸಕರ ವಿರುದ್ದ ಶುಕ್ರವಾರದ ತನಕ ಯಾವುದೇ ಕ್ರಮ ಕೈಗೊಳ್ಳಬಾರದು. ಇದು ರಾಜಸ್ತಾನ ಹೈಕೋರ್ಟ್ ಸ್ಪೀಕರ್ ಸಿ ಪಿ ಜೋಷಿ ಅವರಿಗೆ ನೀಡಿರುವ ನಿರ್ದೇಶನ. ಇದರಿಂದಾಗಿ ಶುಕ್ರವಾರದ ತನಕ ಬಂಡಾಯದ ಬಾವುಟ ಹಾರಿಸಿರುವ ಪೈಲಟ್ ನಿರಾಳರಾಗಿದ್ದಾರೆ. ಆದರೆ ನ್ಯಾಯಾಲಯಕ್ಕೆ ಸ್ಪೀಕರ್ ಆದೇಶ ಪ್ರಶ್ನಿಸುವ ಅಧಿಕಾರ ಇಲ್ಲ ಎಂಬ ತೀರ್ಮಾನದಡಿಯಡಿಯಲ್ಲಿ ಸ್ಪೀಕರ್ ಕ್ರಮ ಕೈಗೊಂಡರೆ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ಕೂಡ ಕಾರಣವಾಗಲಿದೆ.
ಪಕ್ಷದ ನಾಯಕತ್ವದ ವಿರುದ್ದ ಧ್ವನಿ ಎತ್ತಿರುವುದು ಭಿನ್ನಮತೀಯ ಚಟುವಟಿಕೆ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ ಎಂದು ಸಚಿನ್ ಪೈಲಟ್ ಪರ ವಕೀಲರು ವಾದ ಮಂಡಿಸಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬದಲಾಯಿಸಬೇಕು ಎನ್ನುವುದು ಸಚಿನ್ ಪೈಲಟ್ ಅವರ ಬೇಡಿಕೆಯಾಗಿದೆ. ಸಚಿನ್ ಪೈಲಟ್ ಜತೆ ಇದೀಗ 18 ಶಾಸಕರು ಗುರುತಿಸಿಕೊಂಡಿದ್ದಾರೆ. ಸಚಿನ್ ಪೈಲಟ್ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲ ಅವರ ಅಳಿಯ.