Sunday, July 3, 2022

ತಿರುಪತಿ ಲಡ್ಡು @305!

Follow Us

ತಿರುಪತಿ: ಇಲ್ಲಿ ತಯಾರಾಗುವ ತಿರುಪತಿ ಲಡ್ಡುವಿಗೆ ಭಾನುವಾರ (ಆ.2) 305ನೇ ಹುಟ್ಟುಹಬ್ಬ ಸಂಭ್ರಮ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಬಹುತೇಕ ಭಕ್ತರು ಲಡ್ಡು ತರದೇ ಮರಳುವುದು ತೀರಾ ಅಪರೂಪ. ಇದಕ್ಕೆ ಲಡ್ಡುವಿನ ರುಚಿಯೇ ಕಾರಣ.
ಈ ಲಡ್ಡು ಎಷ್ಟು ಪ್ರಸಿದ್ಧವಾಗಿದೆಯೆಂದರೆ ತಿರುಪತಿಯ ಪ್ರಮುಖ ಆದಾಯದ ಮೂಲವಾಗುವಷ್ಟು ಫೇಮಸ್ ಆಗಿದೆ. ಅಷ್ಟೇ ಅಲ್ಲ, ಕೆಲ ಸಂದರ್ಭಗಳಲ್ಲಿ ಭಕ್ತರಿಗೆ ದುಡ್ಡು ಕೊಟ್ಟರೂ ಬೇಕಾದಷ್ಟು ಲಡ್ಡು ಸಿಗುವುದು ಕಷ್ಟವಾಗಿರುತ್ತದೆ. ಆದ್ದರಿಂದಲೇ ಭಕ್ತರಿಗೆ ಸೀಮಿತ ಸಂಖ್ಯೆಯ ಲಡ್ಡು ವಿತರಣೆ ಮಾಡಲಾಗುತ್ತದೆ.
ತಿರುಪತಿ ಲಾಡು ಮೊದಲ ಬಾರಿಗೆ ಸಿದ್ಧವಾಗಿದ್ದು 1715ರ ಆಗಸ್ಟ್​ 2ರಂದು. ಇಂದಿಗೆ 305 ವರ್ಷ. ಕೆಲ ವಿಶೇಷ ಸಂದರ್ಭಗಳಲ್ಲಿ ತಿರುಪತಿಯಲ್ಲದೆ ದೆಹಲಿ ಮತ್ತು ಬೇರೆ ರಾಜ್ಯಗಳಲ್ಲೂ ಲಡ್ಡು ತಯಾರಿಸಲಾಗುತ್ತದೆ. ತಿರುಪತಿ ಲಡ್ಡು ಕೋರ್ಟ್ ಮೆಟ್ಟಿಲನ್ನೂ ಹತ್ತಿದೆ. ಸಿಹಿತಿನಿಸು ಮಾರಾಟಗಾರರೊಬ್ಬರು ತಾವು ತಯಾರಿಸುವ ಲಡ್ಡುಗೆ ತಿರುಪತಿ ಲಡ್ಡು ಎಂದು ಹೆಸರಿಟ್ಟಿತ್ತು. ಈ ಬಗ್ಗೆ ಟಿಟಿಡಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಮದ್ರಾಸ್ ಹೈ ಕೋರ್ಟ್ ತಿರುಪತಿ ದೇವಸ್ಥಾನದ ಲಡ್ಡುವನ್ನೇ ಅಧಿಕೃತ ಲಡ್ಡು ಎಂದು ತೀರ್ಪು ನೀಡಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!