newsics.com
ನವದೆಹಲಿ: ಕೊರೋನಾದಿಂದ ಬಾಗಿಲು ಮುಚ್ಚಿದ್ದ ಮಾರುಕಟ್ಟೆಗಳು ಬಾಗಿಲು ತೆರೆಯುತ್ತಿದ್ದಂತೆ ತರಕಾರಿ ದರ ಮುಗಿಲು ಮುಟ್ಟುತ್ತಿದ್ದು, ದೆಹಲಿಯಲ್ಲಿ ಟೊಮೇಟೊ 80ರ ಗಡಿ ದಾಟಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಟೊಮೇಟೊ ಬೆಳೆಯುವ ರಾಜ್ಯಗಳಿಂದ ಟೊಮೇಟೊ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ. ಜೂನ್ ನಲ್ಲಿ ಮಾರುಕಟ್ಟೆ ಬಾಗಿಲು ತೆರೆಯದಿದ್ದಾಗಲೂ ಟೊಮೆಟೊ ದರ 50-60 ರೂಪಾಯಿ ಅಷ್ಟಿತ್ತು.
ಈ ವಾರದಲ್ಲಿ ದಿಢೀರ್ ಏರಿಕೆಯಾಗಿದ್ದು, ಆನ್ ಲೈನ್ ನಲ್ಲಿ 60, 75 ರೂಪಾಯಿ ದರವಿದ್ದರೂ, ಮಾರುಕಟ್ಟೆಯಲ್ಲಿ 80 ರೂಪಾಯಿಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ 80ರ ಗಡಿ ದಾಟಿದ ಟೊಮೇಟೊ
Follow Us