ನವದೆಹಲಿ: ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಎದುರುನೋಡುತ್ತಿರುವ ಸಿಬಿಎಸ್ಇ ಹತ್ತನೆ ತರಗತಿ ಪರೀಕ್ಷಾ ಫಲಿತಾಂಶ ನಾಳೆ ಬುಧವಾರ ಪ್ರಕಟಗೊಳ್ಳಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇದನ್ನು ಪ್ರಕಟಿಸಿದ್ದಾರೆ. ಸಿಬಿಎಸ್ಇ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ಸೋಮವಾರ ಸಿಬಿಎಸ್ಇ, ಪ್ಲಸ್ ಟು ತರಗತಿಯ ಫಲಿತಾಂಶ ಪ್ರಕಟಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ತೇರ್ಗಡೆ ಪ್ರಮಾಣದಲ್ಲಿ ಶೇಕಡ 5 ಹೆಚ್ಚಳವಾಗಿತ್ತು.