newsics.com
ನವದೆಹಲಿ: ದೇಶದ ಟಾಪರ್ ಐಎಎಸ್ ದಂಪತಿ ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ವಿಚ್ಚೇದನ ಪಡೆದಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು. ಅದೇ ವರ್ಷ ಅತರ್ ಖಾನ್ ಎರಡನೇ ಸ್ಥಾನ ಪಡೆದಿದ್ದರು. ಅಲ್ಲಿಂದಲೇ ಅವರಿಬ್ಬರ ಪ್ರಣಯ ಶುರುವಾಗಿತ್ತು. 2018ರಲ್ಲಿ ಅವರಿಬ್ಬರೂ ವಿವಾಹವಾಗಿದ್ದರು. ಇದು ಅಂತರ್ಜಾತೀಯ ವಿವಾಹವಾದ್ದರಿಂದ ಮದುವೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಲವ್ ಜಿಹಾದ್ ಕೂಗು ಎದ್ದಿತ್ತು.
ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ಇಬ್ಬರೂ ರಾಜಸ್ಥಾನದ ಜೈಪುರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಅತರ್ ಖಾನ್ ಅವರನ್ನು ಶ್ರೀನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.