ದೆಹಲಿ: ಹೊಸ ವರ್ಷಾಚರಣೆಗಾಗಿ ಭಾರೀ ಜನ ಸೇರಿದ್ದರಿಂದ ಇಲ್ಲಿನ ಇಂಡಿಯಾ ಗೇಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ಜನ ಪರದಾಡಿದರು.
ಟ್ರಾಫಿಕ್ ಸುಗಮಗೊಳಿಸುವ ಕಾರಣಕ್ಕೆ ಇಂಡಿಯಾ ಗೇಟ್ ಸುತ್ತಮುತ್ತ ಇರುವ ಒಟ್ಟು ಐದು ಮೆಟ್ರೋ ಸ್ಟೇಶನ್ಗಳ ಪ್ರವೇಶ ಹಾಗೂ ನಿರ್ಗಮನ ಗೇಟ್ಗಳೆರನ್ನೂ ಒಂದು ಗಂಟೆ ಕಾಲ ಮುಚ್ಚಲಾಗಿತ್ತು.
ಮಂಗಳವಾರ ಮಧ್ಯರಾತ್ರಿ ಕೂಡ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಲ್ಲಿ ರಾಜೀವ್ ಚೌಕ್ ಮೆಟ್ರೋ ಸ್ಟೇಶನ್ನ ನಿರ್ಗಮನ ದ್ವಾರವನ್ನು ರಾತ್ರಿ 9 ಗಂಟೆ ನಂತರ ನಿರ್ಬಂಧಿಸಲಾಗಿತ್ತು.