ದೆಹಲಿ: 2020 ರ ಮಾರ್ಚ್ ಅಂತ್ಯಕ್ಕೆ ಪ್ಯಾಸೆಂಜರ್ ರೈಲುಗಳ ಪ್ರಯಾಣ ದರ ಹೆಚ್ಚಳವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್, ಪ್ರಯಾಣ ದರ ಮತ್ತು ಸರಕು ಸಾಗಣೆ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸರಕು ಸಾಗಣೆ ದರ ಹೆಚ್ಚಾಗಿದೆ ಎನ್ನುವ ಮೂಲಕ ಪ್ರಯಾಣ ದರ ಹೆಚ್ಚಳದ ಸುಳಿವು ನೀಡಿದ್ದಾರೆ. ಪ್ರಯಾಣ ದರ ಏರಿಕೆ ಯಾವಾಗಿನಿಂದ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ದಿನಾಂಕವೂ ನಿಗದಿಯಾಗಿಲ್ಲ. ಇದೊಂದು ಸೂಕ್ಷ್ಮ ವಿಷಯ. ಹೀಗಾಗಿ ನಾನು ಈ ಬಗ್ಗೆ ಬೇರಾವುದೇ ಮಾಹಿತಿ ನೀಡಲಾರೆ. ಆದರೆ ಈ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಯಾದವ್ ಹೇಳಿದ್ದಾರೆ.
ಮುಂದಿನ ಮಾರ್ಚ್ ವೇಳೆಗೆ ರೈಲು ಪ್ರಯಾಣ ದರ ದುಬಾರಿ
Follow Us