newsics.com
ಉತ್ತರ ಪ್ರದೇಶ: ಅವಳಿ ಮಕ್ಕಳು 25ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಹದಿನಾಲ್ಕು ವರ್ಷದ ಅವಳಿ ಸಹೋದರರು ಬೆಳಗಿನ ಜಾವ 1 ಗಂಟೆ ಸುಮಾರಿಗೆ 25ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದು, ಅವರು ಪ್ರತೀಕ್ ಗ್ರಾಂಡ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು.
ದುರ್ಘಟನೆ ಸಂಭವಿಸಿದಾಗ ಮಕ್ಕಳ ತಾಯಿ ಮತ್ತು ಸಹೋದರಿ ಮನೆಯಲ್ಲಿ ಇದ್ದರು ಮತ್ತು ಅವರ ತಂದೆ ಬೇರೆ ಊರಿಗೆ ತೆರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.