newsics.com
ಹೈದರಾಬಾದ್: ನಟಿ ಮೀರಾ ಚೋಪ್ರಾಗೆ ಸಾಮಾಜಿಕ ಜಾಲ ತಾಣ ಟ್ವಿಟರ್ ಮೂಲಕ ಬೆದರಿಕೆ ಮತ್ತು ಹತ್ಯೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳುವಂತೆ ಪೊಲೀಸರು ಟ್ವಿಟರ್ ಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಟ್ವಿಟರ್ ಸಂಸ್ಥೆಗೆ ಪತ್ರ ಬರೆಯಲಾಗಿದೆ.
ತೆಲುಗಿನ ಖ್ಯಾತ ನಟನೊಬ್ಬನ ಅಭಿಮಾನಿಯೆಂದು ಹೇಳಿಕೊಂಡ ವ್ಯಕ್ತಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಟ್ವಿಟರ್ ಮೂಲಕ ಬೆದರಿಕೆ ಒಡ್ಡಿದ್ದ. ಇದು ಫೇಕ್ ಅಕೌಂಟ್ ಎಂಬ ಸಂಶಯ ತಲೆದೋರಿದೆ.
ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಹೈದರಾಬಾದ್ ಪೊಲೀಸರು ಟ್ವಿಟರ್ ಗೆ ಪತ್ರ ಬರೆದಿದ್ದಾರೆ. ಮಾಹಿತಿ ನೀಡಿ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಿದ್ದಾರೆ.
ಬೆದರಿಕೆ ಸಂಬಂಧ ನಟಿ ಮೀರಾ ಚೋಪ್ರಾ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದರು