Tuesday, April 13, 2021

ಸೆಪ್ಟೆಂಬರ್ ಹೊತ್ತಿಗೆ ದೇಶದ ಅತಿ ಗಣ್ಯರಿಗಾಗಿ ಎರಡು ಬಿ777 ವಿಮಾನ

ನವದೆಹಲಿ: ಅತಿಗಣ್ಯರ ಪ್ರಯಾಣಕ್ಕೆ ಮೀಸಲಾದ ಎರಡು ಬಿ777 ವಿಮಾನಗಳು ಮುಂದಿನ ಸೆಪ್ಟೆಂಬರ್ ಒಳಗಾಗಿ ಸೇವೆಗೆ ಲಭ್ಯವಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರಕ್ಕಾಗಿ ಈ ಅತ್ಯಾಧುನಿಕ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಮುಂದಿನ ಸೆಪ್ಟೆಂಬರ್ ಒಳಗಾಗಿ ಬೋಯಿಂಗ್ ಕಂಪನಿ ಏರ್ ಇಂಡಿಯಾಗೆ ಪೂರೈಸುವ ಸಾಧ್ಯತೆಗಳಿವೆ.
ಜುಲೈನಲ್ಲೆ ಈ ವಿಮಾನಗಳು ಸೇವೆಗೆ ಲಭ್ಯವಾಗಬೇಕಿತ್ತು ಎಂದು ಈ ಹಿಂದೆ ಏರ್‌ಇಂಡಿಯಾ ಪ್ರಕಟಿಸಿತ್ತು. ಕೋವಿಡ್-19 ಕಾರಣದಿಂದಾಗಿ ವಿಮಾನ ಪೂರೈಕೆ ವಿಳಂಬವಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಸಿಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಈ ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌ಗಳ ಬದಲಾಗಿ ಭಾರತೀಯ ವಾಯುಪಡೆ ಪೈಲಟ್‌ಗಳು ಚಲಾಯಿಸಲಿದ್ದಾರೆ. ಈ ಅತ್ಯಾಧುನಿಕ ವಿಮಾನಗಳನ್ನು ಏರ್ ‌ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್‌ಎಲ್) ಸಿಬ್ಬಂದಿ ನಿರ್ವಹಿಸಲಿದ್ದಾರೆ. ಹೊಸ ವಿಮಾನಗಳು ಬಂದ ಬಳಿಕ ಈಗಿನ ಏರ್​ಇಂಡಿಯಾದ ಬಿ747 ವಿಮಾನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಿ777 ವಿಮಾನಗಳು ಲಾರ್ಜ್ ಏರ್‌ಕ್ರಾಫ್ಟ್ ಇನ್‌ಫ್ರಾರೆಡ್ ಕೌಂಟರ್‌ಮೆಷರ್ಸ್‌ ಎಂಬ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ಸ್ವಯಂರಕ್ಷಣ ಸೂಟ್​ಗಳನ್ನೂ ಇವು ಒಳಗೊಂಡಿವೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್​ಎಐಆರ್​ಸಿಎಂ ವ್ಯವಸ್ಥೆಯನ್ನು ಅಮೆರಿಕ 1,434.72 ಕೋಟಿ ರೂ. ವೆಚ್ಚದಲ್ಲಿ ಒದಗಿಸಿದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!