newsics.com
ಪಶ್ಚಿಮ ಬಂಗಾಳ: ಕಾರ್ಖಾನೆಯಲ್ಲಿ ಕಾದ ಕಬ್ಬಿಣದ ದ್ರವ ಬಿದ್ದು ಇಬ್ಬರು ಕಾರ್ಮಿಕರ ದಾರುಣ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಕಾರ್ಖಾನೆಯಲ್ಲಿ ನಡೆದಿದೆ.
ಮೃತ ಕಾರ್ಮಿಕರನ್ನು ಮಹಮ್ಮದ್ ಅಜೀಜ್ (40) ಮತ್ತು ರಮೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ.
ಬೋರ್ಜೋರಾದ ಘುತ್‌ಫುಟಿಯಾದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬಾಯ್ತ ಸ್ಫೋಟಗೊಂಡ ಪರಿಣಾಮ ಕಾದ ಕಬ್ಬಿಣದ ದ್ರವ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಇದರಿಂದ 15 ಕಾರ್ಮಿಕರು ಸುಟ್ಟಗಾಯಗಳಿಂದ ಬಳಳುತ್ತಿದ್ದರು. ಇವರಲ್ಲಿ ತೀವ್ರವಾಗಿ ಗಾಯಗೊಂಡ 14 ಕಾರ್ಮಿಕರನ್ನು ದುರ್ಗಾಪುರದ ಬಿಧಾನ್ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.