ಮಲ್ಲಪುರಂ: ಕೇರಳದ ಕುಟ್ಟಿಪ್ಪುರಂನಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಕರ್ನಾಟಕದ ಹಿರಿಯೂರು ಮೂಲದ ಪ್ರಭಾಕರ್ (52) ಮತ್ತು ಪಾಂಡುರಂಗ (36) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟ್ಟಿಪ್ಪುರಂ ಪಟ್ಟಣದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕದ ನಿವಾಸಿಗಳು ಪ್ರಯಾಣಿಸುತ್ತಿದ್ದ ಕಾರು ಟ್ರಕ್ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ.
ಕೇರಳದಲ್ಲಿ ಅಪಘಾತ: ಕರ್ನಾಟಕದ ಇಬ್ಬರ ಸಾವು
Follow Us