ತಿರುವನಂತಪುರಂ: ಕಸ್ಟಂಮ್ಸ್ ಅಧಿಕಾರಿಗಳು ಚಿನ್ನದ ಭರ್ಜರಿ ಭೇಟೆಯಾಡಿದ್ದಾರೆ. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಆರು ಪ್ರಯಾಣಿಕರಿಂದ ಒಟ್ಟು ಎರಡು ಕಿಲೋ 49 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರು ತಮ್ಮ ಒಳ ಉಡುಪಿನಲ್ಲಿ ಈ ಚಿನ್ನವನ್ನು ಬಚ್ಚಿಟ್ಟಿದ್ದರು.
ಇನ್ನೊಂದೆಡೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕೂಡ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾಸರಗೋಡಿನ ಮಂಜೇಶ್ವರದ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಈ ಬೆಳವಣಿಗೆ ಮಧ್ಯೆ 30 ಕಿಲೋ ಚಿನ್ನ ಕಳ್ಳ ಸಾಗಾಟ ಪ್ರಕರಣ ಸಂಬಂಧ ದುಬೈನಲ್ಲಿ ನೆಲೆಸಿರುವ ಉದ್ಯಮಿ ಫೈಸಲ್ ಫರೀದ್ ವಿರುದ್ದ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಫೈಸಲ್ ಬಂಧನಕ್ಕೆ ಇಂಟರ್ ಪೋಲ್ ನೆರವು ಪಡೆಯುವುದಾಗಿ ರಾಷ್ಟ್ರೀಯ ತನಿಖಾದಳ ನ್ಯಾಯಾಲಯಕ್ಕೆ ತಿಳಿಸಿದೆ.