Saturday, April 17, 2021

ಮದ್ಯ ಮಾರಾಟದ ಮೊದಲ ದಿನವೇ ಇಬ್ಬರ ಆತ್ಮಹತ್ಯೆ

ಚಿತ್ತೂರ್:  ಮದ್ಯ ಮಾರಾಟದ ಮೊದಲ ದಿನವೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಂನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ವಿಪರೀತ ಮದ್ಯ ಸೇವಿಸಿ ಮನೆಗೆ ಬಂದ ಪತಿ, ಪತ್ನಿ ಮತ್ತು ಮಗಳ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಬೇಸೆತ್ತ ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಕೂಡ ಕಳೆದ 40 ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿತ್ತು.  ಸರ್ಕಾರ  ಮದ್ಯ ಮಾರಾಟಕ್ಕೆ  ಸೋಮವಾರ ಅವಕಾಶ ಕಲ್ಪಿಸಿತ್ತು. ಇದೇ ವೇಳೆ ರಾಜ್ಯದಲ್ಲಿ ಕೂಡ ಮದ್ಯ ಮಾರಾಟ ಆರಂಭಗೊಂಡಿದ್ದು, ಮೊದಲ ದಿನವೇ 45 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು  ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!