ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇಂದು ಮುಂಜಾನೆ ಈ ಕಾರ್ಯಾಚರಣೆ ಆರಂಭವಾಯಿತು. ಶ್ರೀನಗರ ಸಮೀಪದ ರಾನ್ ಭೀಘಡ್ ಪ್ರದೇಶದಲ್ಲಿ ಉಗ್ರರು ಆಶ್ರಯಪಡೆದಿದ್ದರು.
ಶರಣಾಗತರಾಗುವಂತೆ ಮಾಡಿದ ಮನವಿಗೆ ಭಯೋತ್ಪಾದಕರು ಸ್ಪಂದಿಸದಿದ್ದಾಗ ಗುಂಡಿನಿಂದ ಉತ್ತರ ನೀಡಲಾಯಿತು. ಇದೀಗ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು ಅವರ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿದಿದೆ.
ಕಳೆದ ಆರು ತಿಂಗಳಲ್ಲಿ 40ಕ್ಕೂ ಹೆಚ್ಚು ಉಗ್ರರನ್ನು ಭದ್ರತಾಪಡೆ ಯಮಪುರಿಗೆ ಅಟ್ಟಿದೆ. ಕಾಶ್ಮೀರದಲ್ಲಿ ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ.