NEWSICS.COM
ಜಮ್ಮು: ಜಮ್ಮುವಿನ ಬಳಿ ‘ದಿ ರೆಸಿಸ್ಟೆನ್ಸ್ ಫೋರ್ಸ್’ (ಟಿ ಆರ್’ಎಫ್)ನ ಇಬ್ಬರು ಭಯೋತ್ಪಾದಕರನ್ನು ಬಂಧಿಸಿ , ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಸಹಿತವಾಗಿ ಭಯೋತ್ಪಾದಕರು ಓಡಾಡುತ್ತಿದ್ದಾರೆ ಎಂಬ ನಿಖರ ಮಾಹಿತಿಯೊಂದಿಗೆ ಎಸ್ ಒಜಿ ಪ್ರದೇಶದಲ್ಲಿ ವಿಶೇಷ ಚೆಕ್’ಪಾಯಿಂಟ್ ಸ್ಥಾಪಿಸಿ, ಕಾರಿನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಲಷ್ಕರ್-ಎ-ತೈಬಾದ್ ಗುಂಪಿನ ಸದಸ್ಯರಾಗಿದ್ದಾರೆ ಎಂದು ವರದಿಯಾಗಿದೆ.