newsics.com
ಮುಂಬೈ : ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯ್ ಕೋಟಕ್ ಅವರ ಪುತ್ರ ಜೇ ಕೋಟಕ್ ಅವರು, 2015ರ ಫೆಮಿನಾ ಮಿಸ್ ಇಂಡಿಯಾ ವಿಜೇತ ಅದಿತಿ ಆರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅದಿತಿ ಆರ್ಯ ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಫೋಟೋವನ್ನು ಜೇ ಕೋಟಕ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಳ್ಳವ ಮೂಲಕ ತಮ್ಮ ಸಂಬಂಧದ ಆರಂಭದ ಬಗ್ಗೆ ತಿಳಿಸಿದ್ದಾರೆ.


ಅದಿತಿ ಆರ್ಯ ಪದವಿ ಪಡೆದಿರುವ ಹಂಚಿಕೊಂಡು ಅವರಿಗೆ ಅಭಿನಂದಿಸಿದ್ದಾರೆ. “ಅದಿತಿ, ನನ್ನ ಫಿಯಾನ್ಸಿ , ಇಂದು ಯೇಲ್ ವಿಶ್ವವಿದ್ಯಾನಿಲಯದಿಂದ ತನ್ನ ಎಂಬಿಎ ಪೂರ್ಣಗೊಳಿಸಿದ್ದಾಳೆ. ನಿಮ್ಮ ಬಗ್ಗೆ ಅಪಾರ ಹೆಮ್ಮೆ”, ಎಂದು ಬರೆದುಕೊಂಡಿದ್ದಾರೆ.