newsics.com
ಮಹಾರಾಷ್ಟ್ರ; ಮಹಾರಾಷ್ಟ್ರ ರಾಜಕೀಯ ಪತನದ ಅಂಚಿಗೆ ಬಂದಿದೆ. ಈ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ತೊರೆದಿದ್ದಾರೆ. ‘ವರ್ಷಾ ಬಂಗಲೆ’ಯಿಂದ ಇಂದು ರಾತ್ರಿ ತಮ್ಮ ಸಾಮಗ್ರಿಗಳನ್ನು ಅವರು ಖಾಲಿ ಮಾಡಿದರು.
ಸಂಜೆ ಫೇಸ್ಬುಕ್ ಲೈವ್ ಮೂಲಕ ಮಾತನಾಡಿದ್ದ ಸಿಎಂ ಉದ್ಧವ್, ಯಾವುದೇ ಒಬ್ಬ ಶಾಸಕ ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ನಾನು ಸಿಎಂ ಅಧಿಕೃತ ನಿವಾಸ ತೊರೆದು ಖಾಸಗಿ ನಿವಾಸ ‘ಮಾತೋಶ್ರೀ’ಗೆ ನನ್ನೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಿದ್ಧ ಎಂದಿದ್ದರು. ಅಂತೆಯೇ, ಈಗ ಏಕಾಏಕಿ ಸಿಎಂ ಅಧಿಕೃತ ನಿವಾಸ ತೊರೆದಿದ್ದಾರೆ.