ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಜಾರಿಗೆ ತಂದ ಮುಸ್ಲಿಂ ವಿರೋಧಿ ನೀತಿಗಳ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಮಾನವ ಹಕ್ಕುಗಳ ನಿಗಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆನ್ನೆತ್ ರೋತ್, “ಮೋದಿ ಸರ್ಕಾರದ ಮುಸ್ಲಿಂ ವಿರೋಧಿ ಪ್ರವೃತ್ತಿ, ವಿಶೇಷವಾಗಿ ಕಾಶ್ಮೀರದಲ್ಲಿ ಅವರು ಮಾಡಿದ ಕ್ರಮಗಳು, ಅಸ್ಸಾಂನಲ್ಲಿ ಅವರ ಕ್ರಮಗಳು ಮತ್ತು ಈಗ ತೀರಾ ಇತ್ತೀಚೆಗೆ ಜಾರಿ ಮಾಡಿದ ಮುಸ್ಲಿಮರ ಬಗ್ಗೆ ತಾರತಮ್ಯವೆಸಗುವ ಪೌರತ್ವ ಕಾನೂನಿನ ಬಗ್ಗೆ ನಾವು ಹೆಚ್ಚು ಕಳವಳಗೊಂಡಿದ್ದೇವೆ ” ಎಂದಿದ್ದಾರೆ.