ನವದೆಹಲಿ: ಮಂಗಳವಾರ (ಆ.4) ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಕುತೂಹಲದ ಸಂಗತಿಯೊಂದನ್ನು ಬಹಿರಂಗಪಡಿಸಿದೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಹುಲ್ ಮೋದಿ ಹೆಸರಿನ ಅಭ್ಯರ್ಥಿಯೊಬ್ಬರು 420ನೇ ರ್ಯಾಂಕ್ನೊಂದಿಗೆ ಉತ್ತೀರ್ಣರಾಗಿದ್ದಾರೆ.
ದೇಶದ ರಾಜಕಾರಣದಲ್ಲಿ ಇಬ್ಬರು ಕಟ್ಟಾ ಎದುರಾಳಿಗಳಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರ ಹೆಸರನ್ನುಳ್ಳ ಈ ಅಭ್ಯರ್ಥಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ IAS, IPS , IRS, IFS ಸೇರಿದಂತೆ ವಿವಿಧ ಹುದ್ದೆಗಳಿಗೆ ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡ 829 ಮಂದಿ ಆಯ್ಕೆಯಾಗಿದ್ದಾರೆ.
UPSC ಫಲಿತಾಂಶ; ‘ರಾಹುಲ್ ಮೋದಿ’ಗೆ 420 ನೇ rank!
Follow Us