newsics.com
ನವದೆಹಲಿ: ಸಂಪನ್ಮೂಲ ಸಂಗ್ರಹಕ್ಕೆ ಹೊಸ ದಾರಿ ಹುಡುಕುತ್ತಿರುವ ರೈಲ್ವೇ ಇಲಾಖೆ ಪ್ರಯಾಣಿಕರ ಮೇಲೆ ಬಳಕೆದಾರರ ಶುಲ್ಕ ವಿಧಿಸಲು ಮುಂದಾಗಿದೆ. ರೈಲ್ವೇ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಖಾಸಗಿ ಸಹಭಾಗಿತ್ವದಡಿಯಲ್ಲಿ ದೇಶದ ಹಲವು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಖರ್ಚು ಸರಿದೂಗಿಸಲು ಬಳಕೆದಾರರ ಶುಲ್ಕ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ 7000 ರೈಲು ನಿಲ್ದಾಣಗಳ ಪೈಕಿ ಕೆಲವೇ ರೈಲು ನಿಲ್ದಾಣಗಳಲ್ಲಿ ಇದು ಜಾರಿಗೆ ಬರಲಿದೆ. ನವೀಕರಣಗೊಂಡ ರೈಲು ನಿಲ್ದಾಣಗಳು ಮತ್ತು ಅತೀ ಹೆಚ್ಚು ಆದಾಯ ಬರುವ ರೈಲು ನಿಲ್ದಾಣಗಳಲ್ಲಿ ಮೊದಲ ಹಂತವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಹಬೀಬ್ ಗಂಜ್ ಮತ್ತು ಗುಜರಾತಿನ ಗಾಂಧೀನಗರ ರೈಲ್ಲು ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಡಿಯಲ್ಲಿ ಇದೀಗ ಅಭಿವೃದ್ಧಿಪಡಿಸಲಾಗುತ್ತಿದೆ.
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ