Wednesday, October 5, 2022

ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ

Follow Us

newsics.com
ನವದೆಹಲಿ: ಬಳಸಿ ಬಿಸಾಡುವ ಪೇಪರ್ ಅಥವಾ ಪ್ಲಾಸ್ಟಿಕ್ ಕಪ್’ಗಳಲ್ಲಿ ಚಹಾ, ಕಾಫಿಯಂತಹ ಬಿಸಿ ಪಾನೀಯ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ.
ಪ್ರತಿದಿನ ಇಂತಹ ಕಪ್’ಗಳಲ್ಲಿ ಟೀ ಕುಡಿಯುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹ ಸೇರುತ್ತವೆ ಎನ್ನುವುದು ಖರಗ್’ಪುರ ಐಐಟಿ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಪೇಪರ್ ಲೋಟಗಳಲ್ಲಿ ಬಿಸಿ ದ್ರಾವಣ ಹಾಕಿದಾಗ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳು ಮತ್ತು ವಿಷಕಾರಿ ಅಂಶಗಳು ದೇಹ ಪ್ರವೇಶಿಸುತ್ತವೆ ಎನ್ನುವ ಅಂಶ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬಳಸಿ ಬಿಸಾಡುವ ಲೋಟಗಳು ತೆಳು ಪ್ಲಾಸ್ಟಿಕ್ ಪದರ ಹೊಂದಿರುತ್ತವೆ. ಅವು ಬಿಸಿ ನೀರಿನಲ್ಲಿ ಕರಗುತ್ತವೆ. ಖರಗ್’ಪುರ ಐಐಟಿ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್ ಈ ಬಗ್ಗೆ ಮಾತನಾಡಿ, 100 ಎಂಎಲ್ ಬಿಸಿನೀರನ್ನು ಬಳಸಿ ಬಿಸಾಡುವ ಲೋಟಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗಿರುವುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಗ್ ಬಾಸ್ಕೆಟ್ ಬಳಕೆದಾರರ ಮಾಹಿತಿ ಸೋರಿಕೆ ಆರೋಪ

ಉಗ್ರರ ವಿರುದ್ದ ಕೆಚ್ಚೆದೆಯ ಹೋರಾಟ: ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯುವ ಸೇನಾಧಿಕಾರಿ

ಮಾದಕ ದ್ರವ್ಯ ಜಾಲ ತನಿಖೆ: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಮತ್ತೆ ನೋಟಿಸ್

188 ದೇಶಗಳಲ್ಲಿ ಪಾಕ್ ವಿಮಾನ ಹಾರಾಟ ನಿಷೇಧ ಸಾಧ್ಯತೆ

ಕಚೇರಿ ವೇಳೆಯಲ್ಲೇ ಅರೆಬೆತ್ತಲೆ ಡ್ಯಾನ್ಸ್; 6 ಮೆಸ್ಕಾಂ ನೌಕರರು ಸಸ್ಪೆಂಡ್

ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!