newsics.com
ತಿರುಪತಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಿನ್ನೆ (ಡಿ.25) ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.
ಒಟ್ಟು 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದು, ಶ್ರೀವಾರಿ ಹುಂಡಿಯಲ್ಲಿ ದಾಖಲೆಯ 4.39 ಕೋಟಿ ರೂ. ಸಂಗ್ರಹವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಅವಧಿ ಮುಗಿದ ಬಳಿಕ ಜೂನ್ 8 ರಿಂದ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಶ್ರೀವಾರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸೆಪ್ಟೆಂಬರ್ 6 ರಂದು ಒಂದೇ ದಿನ ಹುಂಡಿಯಲ್ಲಿನ ಸಂಗ್ರಹ 1 ಕೋಟಿ ರೂ. ದಾಟಿತ್ತು.
ನೆಟ್ಟಿಗರ ಗಮನ ಸೆಳೆದ ಧರ್ಮಸ್ಥಳದ ಎತ್ತಿನಗಾಡಿ ಕಾರು!
ರಾಜ್ಯಕ್ಕೆ ಹೊಸ ಬಗೆಯ ಕೊರೋನಾ; ಕೇಂದ್ರದಿಂದಲೇ ಮಾಹಿತಿ- ಸಚಿವ
ಅಮೇಜಾನ್ ಕಚೇರಿ ದ್ವಂಸಗೊಳಿಸಿದ ನವನಿರ್ಮಾಣ ಸೇನಾ ಕಾರ್ಯಕರ್ತರು