newsics.com
ಮುಂಬೈ: ಮಹಾರಾಷ್ಟ್ರದ ನಂದರ್ಬಾರ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು 400 ಅಡಿ ಆಳದ ಕಮರಿಗೆ ಉರುಳಿದ್ದರಿಂದ 6 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಖಾಡ್ಕಿ ಘಾಟ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದೆ.
ಮೃತರೆಲ್ಲರೂ ಝಾಪಿ ಫಲಾಯಿ ಗ್ರಾಮದ ನಿವಾಸಿಗಳು. ಸುಮಾರು 24 ಮಂದಿ (ಬಹುತೇಕ ಕಾರ್ಮಿಕರು) ಮಹೀಂದ್ರಾ ಮ್ಯಾಕ್ಸ್ ವಾಹನದಲ್ಲಿ ತೋರನ್ಮಾಲ್ಗೆ ತೆರಳುತ್ತಿದ್ದರು. ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷೀಣಿಸಿದ ಲಾಲೂ ಆರೋಗ್ಯ; ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
ಪ್ರಸಿದ್ಧ ನಿರೂಪಕ ಲ್ಯಾರಿ ಕಿಂಗ್ ಇನ್ನಿಲ್ಲ
ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು