ಬೆಂಗಳೂರು: ವಿಶ್ವದಾದ್ಯಂತ ಆತಂಕ ಹುಟ್ಟಿಸಿರುವ ಮಾರಣಾಂತಿಕ ಕೊರೋನಾ ವೈರಾಣು ಸೊಂಕಿಗೆ ಸ್ವಯಂಘೋಷಿತ ನಿತ್ಯಾನಂದ ಸ್ವಾಮೀಜಿ ಚಿಕಿತ್ಸೆ ಕಂಡುಹಿಡಿದಿದ್ದಾರಂತೆ!
ಈ ಹಿಂದೆ ತಾವು ಪ್ರಾಣಿಗಳೊಂದಿಗೆ ಸಂಭಾಷಣೆ ನಡೆಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನಿತ್ಯಾನಂದ ಸ್ವಾಮೀಜಿ, ಈಗ ಫೆ. 7 ರಿಂದ ಎರಡು ದಿನಗಳ ಸುದೀರ್ಘ ಮಂತ್ರಘೋಷದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಿಂದ ವೈರಾಣು ಹರಡುವುದನ್ನು ನಿಯಂತ್ರಿಸಬಹುದು ಎಂದು ಕೆಲ ವೆಬ್ ಸೈಟ್ ಗಳು ಪ್ರಸಾರ ಮಾಡಿದೆ.
ಆದರೆ, ಇಲ್ಲಿಯವರೆಗೆ ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಆದ್ದರಿಂದ ಇಂತಹ ವದಂತಿಗಳನ್ನು ನಂಬಬಾರದು ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.