ಕಾನ್ಪುರ: ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆ ಆಪ್ತ ಸಹಚರ ಗೋಪಾಲ್ ಸೈನಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈತನಿಗೆ ಉತ್ತರ ಪ್ರದೇಶ ಪೊಲೀಸರು ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೂವರು ಸಬ್ಇನ್ಸ್ಪೆಕ್ಟರ್ ಗಳು ಸೇರಿ 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆ ತಂಡದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಗೋಪಾಲ್ ಸೈನಿ ಕಾನ್ಪುರ ನ್ಯಾಯಾಲಯದ ಮುಂದೆ ಶರಣಾದ. ನಂತರ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಜುಲೈ 3ರಂದು ಕಾನ್ಪುರದ ಬಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಮತ್ತು ಆತನ ಸಹಚರರು 8 ಪೊಲೀಸರನ್ನು ಹತ್ಯೆ ಮಾಡಿದ್ದರು.
15 ಕೋಟಿ ಹಣ ವರ್ಗಾವಣೆ; ಇಡಿಯಿಂದ ಸುಶಾಂತ್ ಗೆಳತಿ ರಿಯಾ ಬಂಧನ ಸಂಭವ