newsics.com
ನವದೆಹಲಿ: ವಿದೇಶದಲ್ಲಿ ಕುಸ್ತಿ ತರಬೇತಿಗೆ ಕಳುಹಿಸಲಾಗಿದ್ದ ಕುಸ್ತಿ ಪಟು ವಿನೇಶ್ ಪೊಗಟ್ ಅಲ್ಲಿ ತರಬೇತುದಾರರ ಪತ್ನಿಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಟೋಕಿಯೊ ಒಲಿಂಪಿಕ್ಸ್ ಗೆ ಪೂರ್ವಭಾವಿಯಾಗಿ ಹೆಚ್ಚಿನ ತರಬೇತಿ ಪಡೆಯಲು ಕುಸ್ತಿ ಪಟು ವಿನೇಶ್ ಪೊಗಟ್ ಅವರನ್ನು ಹಂಗೇರಿಗೆ ಕಳುಹಿಸಿಕೊಡಲಾಗಿತ್ತು. ಅವರ ವಿದೇಶಿ ತರಬೇತುದಾರ ವೂಲರ್ ಅಕೂಸ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
ವೂಲರ್ ಅಕೂಸ್ ಅವರ ಪತ್ನಿ ಕೂಡ ಕುಸ್ತಿಪಟುವಾಗಿದ್ದಾರೆ. ಅಲ್ಲಿ ತರಬೇತಿ ಪಡೆಯುವ ಬದಲು ವಿನೇಶ್,ವೂಲರ್ ಅಕೂಸ್
ಪತ್ನಿಗೆ ಕೋಚ್ ಆಗಿ ಕೆಲಸ ಮಾಡಿದ್ದಾರೆ ಎಂದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಆರೋಪಿಸಿದ್ದಾರೆ.
ಅಶಿಸ್ತಿನ ವರ್ತನೆಗಾಗಿ ವಿನೇಶ್ ಪೊಗಟ್ ಅವರನ್ನು ಭಾರತೀಯ ಕುಸ್ತಿ ಫೆಡರೇಷನ್ ಅಮಾನತು ಮಾಡಿದೆ.