newsics.com
ಮುಂಬೈ: ಫಿಟ್ ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸುವವರು ಯಾರು ಕೂಡ ಇಲ್ಲ. ಕಳೆದ ಹಲವು ವರ್ಷಗಳಿಂದ ಕೊಹ್ಲಿ ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಆಹಾರದ ವಿಷಯದಲ್ಲಿ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಶಿಸ್ತು.
ಇತ್ತೀಚೆಗೆ ಕೊಹ್ಲಿ ತಮ್ಮ ಫಿಟ್ ನೆಸ್ ಕುರಿತಂತೆ ಕೆಲವು ಟಿಪ್ಸ್ ಗಳನ್ನು ಬಹಿರಂಗಪಡಿಸಿದ್ದಾರೆ. ಕೊಹ್ಲಿ ಎಂದಿಗೂ ಹೊಟ್ಟೆ ಬಿರಿಯುವಷ್ಟು ಊಟ ಮಾಡಲ್ಲಂತೆ. ಶೇಕಡ 90ರಷ್ಟು ಊಟ ಎಂಬ ಪದ್ದತಿ ಅನುಸರಿಸುತ್ತಿದ್ದಾರೆ.
ಸಕ್ಕರೆ ದೂರ ಇಟ್ಟಿದ್ದಾರೆ. ಕೊಹ್ಲಿ ಈ ಹಿಂದೆ ದುಬಾರಿ ನೀರು ಕುಡಿಯುತ್ತಿದ್ದಾರೆ ಎಂಬ ವದಂತಿ ಹರಡಿತ್ತು.