ನವದೆಹಲಿ: ಆತ್ಮ ವಿಶ್ವಾಸವನ್ನು ಕಳೆದುಕೊಂಡು ಜೀವ ಕಳೆ ಮರೆಯಾಗಿ ಮಲಗಿದ್ದ ಭಾರತದ ಸಮಾಜದ ಆತ್ಮ ಶಕ್ತಿಯನ್ನು ಬಡಿದೆಬ್ಬಿಸಿದ ವೀರ ಸನ್ಯಾಸಿನಿ ವಿವೇಕಾನಂದ ಅವರ ಹುಟ್ಟು ಹಬ್ಬ ದಿನವಾದ ಇಂದು ರಾಷ್ಟ್ರ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿತು. ವಿವೇಕಾನಂದ ಅವರು ಅಮೆರಿಕದ ಧರ್ಮ ಸಂಸತ್ ನಲ್ಲಿ ಮಾಡಿದ ಭಾಷಣ ಅವರಿಗೆ ವಿಶ್ವ ಖ್ಯಾತಿ ತಂದೊಡ್ಡಿತ್ತು. ವೀರ ಸನ್ಯಾಸಿನಿಯ ಬದುಕು ನಡೆಸಿದ್ದ ವಿವೇಕಾನಂದ ಅವರು ವರ್ತಮಾನದ ಸಮಸ್ಯೆಗಳನ್ನು ಪರಿಹರಿಸುವತ್ತ ಅಷ್ಟೇ ತಾರ್ಕಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಭಾರತೀಯರ ಬಗ್ಗೆ, ಭಾರತದ ಸಂಸ್ಕೃತಿ ಬಗ್ಗೆ ವಿದೇಶಿಯರು ಹೊಂದಿದ್ದ ಕೀಳರಿಮೆಯನ್ನು ತೊಡೆದು ಹಾಕುವಲ್ಲಿ ವಿವೇಕಾನಂದ ಅವರ ಕೊ಼ಡುಗೆ ಅತ್ಯಂತ ಮಹತ್ವಪೂರ್ಣವಾಗಿದೆ. ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.