newsics.com
ಪುಣೆ: ಮಾರಕ ಕೊರೋನಾ ಅಬ್ಬರಿಸುತ್ತಿರುವ ಪುಣೆಯಲ್ಲಿ ಮದುವೆ ಕಾರ್ಯಕ್ರಮದ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ಹೇರಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ಎಂದು ಜಿಲ್ಲಾಡಳಿತ ಹೇಳಿದೆ.
ವಾರಾಂತ್ಯದಲ್ಲಿ ಮದುವೆ ಕಾರ್ಯಕ್ರಮ ನಡೆಸುವವರು ಅನುಮತಿ ಪಡೆದಿರಬೇಕು. ಇದು ಕಡ್ಡಾಯ ಎಂದು ಆಯುಕ್ತ ವಿಕ್ರಂ ಕುಮಾರ್ ಹೇಳಿದ್ದಾರೆ.
ಮದುವೆಯಲ್ಲಿ ಕೇವಲ 50 ಮಂದಿಯ ಉಪಸ್ಥಿತಿಗೆ ಅನುಮತಿ ನೀಡಲಾಗಿದೆ.
ಪುಣೆಯಲ್ಲಿ ಕೊರೋನಾ ಇದುವರೆಗೆ ನಿಯಂತ್ರಣಕ್ಕೆ ಬಂದಿಲ್ಲ.