newsics.com
ಕಾಸರಗೋಡು: ಬಡವರಿಗೆ ನೂರಕ್ಕೂ ಹೆಚ್ಚು ಮನೆ ಉಚಿತ ವಾಗಿ ನಿರ್ಮಿಸಿಕೊಟ್ಟ ಕೊಡುಗೈ ದಾನಿ ಹಾಗೂ ಸಮಾಜ ಸೇವಕ ಸಾಯಿ ರಾಂ ಗೋಪಾಲ ಕೃಷ್ಣ ಭಟ್ ನಿಧನಹೊಂದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ಸಮಾಜದ ದುರ್ಬಲ ವರ್ಗದವರ ಕಲ್ಯಾಣ ಗಮನದಲ್ಲಿರಿಸಿ ಅವರಿಗೆ ನೂರಕ್ಕೂ ಹೆಚ್ಚು ಮನೆ ನಿರ್ಮಿಸಿ ಕೊಟ್ಟಿದ್ದರು. ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಹಲವು ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಕೂಡ ನೆರವು ನೀಡಿದ್ದರು.
ಸಾಯಿ ರಾಂ ಗೋಪಾಲಕೃಷ್ಣ ಭಟ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.