newsics.com
ನವದೆಹಲಿ: ಫೇಸ್ಬುಕ್, ವಾಟ್ಸ್ಯಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯವಾದ ಸಮಯದಲ್ಲಿ ಟೆಲಿಗ್ರಾಂಗೆ 70 ಮಿಲಿಯನ್ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ.
ಫೇಸ್ಬುಕ್, ವಾಟ್ಸ್ಯಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಗಳಲ್ಲಿ 6 ಗಂಟೆ ಕಾಲ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಟೆಲಿಗ್ರಾಂಗೆ 70 ಮಿಲಿಯನ್ ಹೊಸ ಬಳಕೆದಾರರ ಸೇರ್ಪಡೆಯಾಗಿದೆ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ.
ಪಾವೆಲ್ ಡುರೋವ್ ತಮ್ಮ ಟೆಲಿಗ್ರಾಂ ಚಾನೆಲ್ನಲ್ಲಿ ಈ ಮಾಹಿತಿ ನೀಡಿದ್ದು, ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದ ಬಳಿಕವೂ ನಮ್ಮ ತಂಡ ಯಾವುದೇ ದೋಷವಿಲ್ಲದೇ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದ್ದಾರೆ.
ಮಿಲಿಯನ್ಗಟ್ಟಲೆ ಜನರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್ ಆಗಿದ್ದರಿಂದ ಅಮೆರಿಕದಲ್ಲಿ ಬಹುಶಃ ಟೆಲಿಗ್ರಾಂ ಸೇವೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಡುರೋವ್ ಹೇಳಿದ್ದಾರೆ.
ಜಿಯೋ ನೆಟ್ವರ್ಕ್ನಲ್ಲೂ ಸಮಸ್ಯೆ: 4 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ದೂರು