newsics.com
ಯುಎಸ್’ಎ: ವಾಟ್ಸಾಪ್ ಇದೀಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ತಂದಿದ್ದು, ವಾಟ್ಸ್ಯಾಪ್ ವೆಬ್ಗಾಗಿ ಫೋನ್ ಅನ್ನು ಆನ್ಲೈನ್ ನಲ್ಲಿ ಇರಿಸುವ ಅಗತ್ಯವಿಲ್ಲ.
ವಾಟ್ಸ್ಯಾಪ್ ಬಳಕೆದಾರರು ತಮ್ಮ ಖಾತೆಯನ್ನು ಬೇರೆ ಸಾಧನಗಳಿಗೆ ಲಿಂಕ್ ಮಾಡಲು ಮತ್ತು ಸ್ಮಾರ್ಟ್ಫೋನ್ ಅನ್ನು ಆನ್ಲೈನ್ನಲ್ಲಿ ಇರಿಸದೆ ಮೆಸೇಜ್ ಕಳುಹಿಸುವ ಫೀಚರ್ ಒಂದನ್ನು ವಾಟ್ಸ್ಯಾಪ್ ಪರೀಕ್ಷಿಸುತ್ತಿದೆ.
ವಾಟ್ಸ್ಯಾಪ್ನ ಈ ಹೊಸ ಫೀಚರ್ ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಉಪಯೋಗವಾಗಲಿದೆ. ಇದು ವಾಟ್ಸ್ಯಾಪ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್ ಆನ್ಲೈನ್ನಲ್ಲಿ ಇಲ್ಲದಿದ್ದರೂ, ಮತ್ತೊಂದು ವಾಟ್ಸ್ಯಾಪ್ ವೆಬ್ ಮೂಲಕ ಮೆಸೇಜ್ ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ.
ಇಲ್ಲಿಯವರೆಗೆ ಬಳಕೆದಾರರು ವಾಟ್ಸ್ಯಾಪ್ ವೆಬ್ ಆವೃತ್ತಿ ಬಳಸುವಾಗ ತಮ್ಮ ಸ್ಮಾರ್ಟ್ಫೋನ್ ಇಂಟರ್ನೆಟ್ಗೆ ಸಂಪರ್ಕಗೊಳಿಸಲೇಬೇಕಿತ್ತು.