newsics.com
ಅಹ್ಮದಾಬಾದ್: ಪ್ರಿಯಕರನ ಜತೆ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಂದ ಪತ್ನಿಯನ್ನು ಬಂಧಿಸಲಾಗಿದೆ. ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ದೀಪ್ತಿ ಪಟೇಲ್ ಎಂದು ಗುರುತಿಸಲಾಗಿದೆ.
ದೀಪ್ತಿ ಪಟೇಲ್ , ಸೌರಭ್ ಸುತ್ತಾರ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಇದು ಪತಿ ಬಿಪಿನ್ ಚಂದ್ರ ಪಟೇಲ್ ಗೆ ತಿಳಿದ ಕಾರಣ ಪ್ರಿಯಕರನ ಸಹಾಯ ಪಡೆದು ಪತಿಯ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತಿಗೆ ನೀಡಿದ ದೀಪ್ತಿ ಪಟೇಲ್ ಬಳಿಕ ತಲೆದಿಂಬಿನಿಂದ ಉಸಿರು ಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಹೃದಯಾಘಾತದಿಂದ ಪತಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನು ನಂಬಿಸಿದ್ದಳು. ಪೊಲೀಸ್ ತನಿಖೆ ವೇಳೆ ಸತ್ಯಾಂಶ ಬಯಲಿಗೆ ಬಂದಿದೆ. ಇದೀಗ ದೀಪ್ತಿ ಪಟೇಲ್ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.