newsics.com
ನಿತ್ಯಾನಂದರ ಆರೋಗ್ಯವು ತೀವ್ರವಾಗಿ ಹದಗೆಟ್ಟಿರುವ ಶಂಕೆಯಿದ್ದು, ತಾನು ಬದುಕಲು ಬಯಸುತ್ತಿಲ್ಲ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಕೈಲಾಸದ ಪೀಠಾಧಿಪತಿ ಬಿಡದಿ ನಿತ್ಯಾನಂದರು, ದೇಹದ ಎಲ್ಲ ಅಂಗಾಂಗಗಳು ಸರಿಯಾಗಿಯೇ ಕೆಲಸ ಮಾಡುತ್ತಿವೆ. ನನಗೆ ಯಾವುದೇ ರೀತಿಯ ರೋಗವಿಲ್ಲ. ಎಂದು ವೈದ್ಯರು ಹೇಳುತ್ತಿದ್ದು, ಆದರೆ ನನಗೆ ಅನ್ನ ನೀರು ಸೇವಿಸಿದರೂ ಸರಿಯಾಗಿ ಜೀರ್ಣ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಕೈಲಾಸದಲ್ಲಿ ನನಗೆ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆಗಳು ಇಲ್ಲದ ಕಾರಣ ನನ್ನ ಶಿಷ್ಯಂದಿರು ನನಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದಿದ್ದಾರೆ.