Thursday, August 18, 2022

ಚುನಾವಣೆಯಲ್ಲಿ ಗೆದ್ದಿದ್ದು ಪತ್ನಿಯರು, ಪ್ರಮಾಣವಚನ ಸ್ವೀಕರಿಸಿದ್ದು ಪತಿ ಮಹಾಶಯರು

Follow Us

newsics.com

ಮಧ್ಯಪ್ರದೇಶ: ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದ ಪತ್ನಿಯರ ಬದಲಿಗೆ ಅವರ ಗಂಡಂದಿರು ಪ್ರಮಾಣವಚನ ಸ್ವೀಕರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗೈಸಾಬಾದ್ ಪಂಚಾಯತ್ನಲ್ಲಿ ಮೂರು ಹಂತದಲ್ಲಿ ಪಂಚಾಯತ್ ಚುನಾವಣೆ ನಡೆದಿದ್ದು, ಅನೇಕ ಮಹಿಳೆಯರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಚುನಾಯಿತ ಸರಪಂಚ್ ಮತ್ತು ಇತರ ಮಹಿಳೆಯರಿಗೆ ಪ್ರಮಾಣ ವಚನ ಬೋಧಿಸಲು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆದರೆ ಪ್ರಮಾಣವಚನ ಸ್ವೀಕರಿಸುವ ವೇಳೆ ಈ ಮಹಿಳೆಯರು ಯಾರೂ ವೇದಿಕೆ ಮೇಲಿರಲಿಲ್ಲ. ಅವರ ಬದಲಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅವರ ಗಂಡಂದಿರು. ಅಧಿಕಾರಿಗಳೇ ಮಹಿಳೆಯರ ಗಂಡಂದಿರಿಗೆ ಪ್ರಮಾಣವಚನ ಸ್ವೀಕರಿಸಲು ಅನುಮತಿಸಿದ್ದಾರೆ ಎಂದು ಹೇಳಿದ್ದು, ಆ ಅಧಿಕಾರಿಗಳು ಈಗ ತಲೆಮರೆಸಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!