ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ್ರೆ ಬೀದಿ ನಾಯಿಯೂ ಕಚ್ಚಿತು!

newsics.com ಕೇರಳ: ಬೆಕ್ಕು ಕಚ್ಚಿದ್ದರಿಂದ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದ ಮಹಿಳೆಯೊಬ್ಬರಿಗೆ ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೊಂದು ಕಚ್ಚಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ವಿಜಿಂಜಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಳಗ್ಗೆ ಅಪರ್ಣಾ ಎಂಬುವವರು ಬೆಕ್ಕು ಕಚ್ಚಿದ್ದರಿಂದ ಲಸಿಕೆ ತೆಗೆದುಕೊಳ್ಳಲು ಹೋಗಿದ್ದರು. ಆರೋಗ್ಯ ಕೇಂದ್ರದಲ್ಲಿ ಸಮಾಲೋಚನೆಯ ಸಮಯದಲ್ಲಿ ಆಕಸ್ಮಿಕವಾಗಿ ಆಸ್ಪತ್ರೆಯ ಕೊಠಡಿಯೊಳಗೆ ಮಲಗಿದ್ದ ನಾಯಿಯ ಬಾಲದ ಮೇಲೆ ಅಪರ್ಣಾ ಕಾಲಿಟ್ಟಿದ್ದಾರೆ. ನಾಯಿ ಅಪರ್ಣಾ ಕಾಲಿಗೆ ಕಚ್ಚಿದೆ. ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ … Continue reading ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ್ರೆ ಬೀದಿ ನಾಯಿಯೂ ಕಚ್ಚಿತು!