newsics.com
ಗುಜರಾತ್: ಮಹಿಳೆಯೊಬ್ಬಳು ತನ್ನ ಇಬ್ಬರು ಅಪ್ರಾಪ್ತ ಪುತ್ರರನ್ನು ಬೆಂಕಿಗೆ ದೂಡಿ ಕೊಂದು ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುಜರಾತ್ ನ ರಾಜ್ಕೋಟ್ ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ನಡೆದ ಕೌಟುಂಬಿಕ ಕಲಹದ ನಂತರ 28 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದಾಳೆ.
ಘಟನೆಯಲ್ಲಿ ತಾಯಿ, ಮಕ್ಕಳು ಮೃತಪಟ್ಟಿದ್ದಾರೆ ಎಂದು ರಾಜ್ಕೋಟ್ ನ ನಕ್ರವಾಡಿ ಪೊಲೀಸರು ತಿಳಿಸಿದ್ದಾರೆ. ಮಹಿಳೆ ತನ್ನ ಮಕ್ಕಳು ಮತ್ತು ತನ್ನ ಮೇಲೆ ಪೆಟ್ರೋಲ್ ಸುರಿದು ಬಳಿಕ ಬೆಂಕಿ ಹಚ್ಚಿದ್ದಾಳೆ.