newsics.com
ಉತ್ತರ ಪ್ರದೇಶ: ಮದುವೆಯಾದ ಹತ್ತೇ ದಿನಕ್ಕೆ ತನ್ನ ಪತ್ನಿ ಗರ್ಭಿಣಿ ಎಂದು ತಿಳಿದ ಪತಿ ಆಘಾತಕ್ಕೊಳಗಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ನವವಿವಾಹಿತ ಮಹಿಳೆ ವಿಪರೀತ ಹೊಟ್ಟೆ ನೋವು ಆಗುತ್ತಿದೆ ಎಂದು ಹೇಳಿದ್ದಳು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ತಪಾಸಣೆ ನಡೆಸಿದ ವೈದ್ಯರು, ಆಕೆ 8 ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ.
ಇದರಿಂದ ಆಘಾತಕ್ಕೊಳಗಾದ ಪತಿ, ನಾನು ಆಕೆಯೊಂದಿಗೆ ಮದುವೆಯ ಮೊದಲು ದೈಹಿಕ ಸಂಪರ್ಕ ಹೊಂದಿರಲಿಲ್ಲ. ಹೀಗಾಗಿ ಈ ಮಗುವಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ಮನೆಯವರ ಒತ್ತಾಯಕ್ಕೆ ಒಪ್ಪಿ ಆಕೆ ಮದುವೆಯಾಗಿದ್ದು, ಮದುವೆಗೆ ಮೊದಲೇ ಇನ್ನೊಬ್ಬನೊಂದಿಗೆ ಸಂಬಂಧವಿತ್ತು. ಹೀಗಾಗಿ ಈ ಮಗು ಆತನದ್ದೇ ಇರಬಹುದು ಎಂದು ಹೇಳಲಾಗುತ್ತಿದೆ.