ನವದೆಹಲಿ: ಮಹಿಳಾ ಎಸ್ಐ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಪ್ರೀತಿ ಅಲಾವತ್ (26) ಸಹೋದ್ಯೋಗಿಯ ಗುಂಡಿಗೆ ಬಲಿಯಾದ ದೆಹಲಿ ಪಿಎಸ್ಐ. ಇವರನ್ನು ಗುಂಡಿಕ್ಕಿ ಕೊಂದ ಸಬ್ಇನ್ಸ್ಪೆಕ್ಟರ್ ದೀಪಾಂಶು ಕೂಡ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ದೆಹಲಿಯ ರೋಹಿಣಿ ಈಸ್ಟ್ ಮೆಟ್ರೋ ರೈಲ್ವೆನಿಲ್ದಾಣದ ಬಳಿ ನಿನ್ನೆ ರಾತ್ರಿ 9.30ರ ಹೊತ್ತಿಗೆ ಈ ಘಟನೆ ನಡೆದಿದೆ. ಪ್ರೀತಿ ಮತ್ತು ದೀಪಾಂಶು ಬ್ಯಾಚ್ಮೆಟ್ ಆಗಿದ್ದು, 2018ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಸಬ್ಇನ್ಸ್ಪೆಕ್ಟರ್ ಗಳಾಗಿ ಸೇರಿದ್ದರು. ಈ ಘಟನೆಗೆ ಕಾರಣ ತಿಳಿದುಬಂದಿಲ್ಲ.
ದೆಹಲಿ ಮಹಿಳಾ ಎಸ್ಐ ಹತ್ಯೆ, ಇನ್ನೋರ್ವ ಎಸ್ಐ ಆತ್ಮಹತ್ಯೆ
Follow Us