newsics.com
ಹೈದರಾಬಾದ್ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಪತ್ನಿ ಖಾರದ ಪುಡಿ ಎರಚಿ ಪತಿಯ ಪ್ರಾಣ ಉಳಿಸಿದ ಘಟನೆ ತೆಲಂಗಾಣದ ವಾರಂಗಲ್ನ ಶಂಭುನಿಪೇಟೆಯಲ್ಲಿ ನಡೆದಿದೆ.
ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್’ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ವರು ದುಷ್ಕರ್ಮಿಗಳು ಹೋಗಿ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ.ವೇಮುಲಾ ಪತ್ನಿ ಕಲ್ಯಾಣಿ ಓಡಿ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಾಳೆ. ಜೊತೆಗೆ ಕಾಪಾಡಿ ಎಂದು ಜೋರಾಗಿ ಕೂಗಿದ್ದಾಳೆ. ಈಕೆಯ ಚೀರಾಟ ಕೇಳಿ ನೆರೆ ಹೊರೆಯವರು ಕೂಡಲೇ ಸ್ಥಳಕ್ಕೆ ಬಂದಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ರಂಜಿತ್ ಕಣ್ಣಿಗೆ ಹೆಚ್ಚು ಕಾರದ ಪುಡಿ ಬಿದ್ದ ಪರಿಣಾಮ ಆತ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗದೆ ಸಿಕ್ಕಿಬಿದ್ದಿದಾನೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
‘ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರಂಜಿತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
https://newsics.com/news/karnataka/transported-the-living-heart-by-air-from-mysore-to-chennai/99530/