Saturday, April 17, 2021

ಕನ್ನಾ – ಪೆಂಚ್ ಹುಲಿ ರಕ್ಷಿತಾರಾಣ್ಯದಲ್ಲಿ ಮಹಿಳಾ ಮಾರ್ಗದರ್ಶಕಿಯರು

newsics.com

ಭೋಪಾಲ್:  ಮಧ್ಯಪ್ರದೇಶದ ಕನ್ನಾ ಮತ್ತು ಪೆಂಚ್ ಹುಲಿ ರಕ್ಷಿತಾರಣ್ಯ ಹುಲಿಗಳಿಗೆ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ. ಇದೀಗ ಈ ಹುಲಿ ಸಂರಕ್ಷಣಾ ಪ್ರದೇಶ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರಗೆ ಗೈಡ್ ಗಳಾಗಿ ಪುರುಷರು ಮಾತ್ರ ಸೇವೆ ಸಲ್ಲಿಸುತ್ತಿದ್ದರು. ಅವರ ಸಾಲಿಗೆ ಮಹಿಳೆಯರು ಸೇರ್ಪಡೆಯಾಗಿದ್ದಾರೆ.

ಹೆಚ್ಚಿನ ಮಹಿಳೆಯರು ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ನೆಲೆಸಿದವರಾಗಿದ್ದಾರೆ. ವಾಹನ ಚಾಲಕರ ಪತ್ನಿಯರು  ಮತ್ತು ಅವರ ಕುಟಂಬ ಸದಸ್ಯರು ಗೈಡ್ ಗಳಾಗಿ ನೇಮಕಗೊಂಡಿದ್ದಾರೆ.

ಕನ್ನಾ ರಾಷ್ಟ್ರೀಯ ಹುಲಿ ರಕ್ಷಿತಾರಣ್ಯದಲ್ಲಿ 13 ಮತ್ತು ಪೆಂಚ್ ನಲ್ಲಿ 11 ಮಹಿಳೆಯರನ್ನು  ಅರಣ್ಯ ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ.  ಪ್ರವಾಸಿಗರಿಗೆ ಅರಣ್ಯದಲ್ಲಿ ಈ ಮಹಿಳಾ ಗೈಡ್ ಗಳು ಮಾರ್ಗದರ್ಶನ ನೀಡಲಿದ್ದಾರೆ.

ಚಿಕ್ಕಂದಿನಿಂದ ಅರಣ್ಯದಲ್ಲಿ ಕಾಡಿನ ಮಧ್ಯೆ ಬೆಳೆದಿದ್ದೇವೆ. ಇದರಿಂದಾಗಿ ಸುಲಭವಾಗಿ ಪ್ರಾಣಿ ಪಕ್ಷಿಗಳನ್ನು ಗುರುತಿಸುವ ಕೌಶಲ್ಯ ಸಿದ್ದಿಸಿದೆ ಎಂದು ಹೊಸದಾಗಿ ನೇಮಕಗೊಂಡಿರುವ ರೇಶ್ಮಾ ಹೇಳಿದ್ದಾರೆ. ಅವರ ಹಿರಿಯ ಸಹೋದರಿ ಸೀಮಾ ಕೂಡ ಅರಣ್ಯ ಗೈಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅರಣ್ಯಾಧಿಕಾರಿ ಎಸ್ ಕೆ ಸಿಂಗ್, ಮಹಿಳೆಯರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನುಷ್ಟು ಮಹಿಳೆಯರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!