Wednesday, November 30, 2022

Women’s Asia Cup ಭಾರತಕ್ಕೆ ಭರ್ಜರಿ ಶುಭಾರಂಭ

Follow Us

newsics.com

ಸೈಲೆಟ್‌: ಜೆಮಿಯಾ ರೋಡ್ರಿಗಸ್‌ ಆಕರ್ಷಕ ಅರ್ಧಶತಕ ಹಾಗೂ ಡಿ ಹೇಮಲತಾ ಅವರ ಆಕರ್ಷಕ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಭಾರತ ಮಹಿಳಾ ತಂಡವು 41 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಭಾರತ ಮಹಿಳಾ ತಂಡದ ಬಲಿಷ್ಠ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಕೂಡ ಸುಮಾರು ಒಂದೂವರೆ ತಿಂಗಳ ಕಾಲ ಬ್ಯಾಟ್ ಹಿಡಿಯದೇ, ತಂಡಕ್ಕೆ ಮರಳಿದ ಕೂಡಲೇ ಅಬ್ಬರಿಸಿದ್ದಾರೆ. ಮಹಿಳಾ ತಂಡವು ಭರ್ಜರಿ ಶುಭಾರಂಭ ಮಾಡಿದೆ.

ಇಂದು  ಮಹಿಳೆಯರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಭಾರತದ ಬ್ಯಾಟರ್ ಜೆಮಿಮಾ 76 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 53 ​​ಎಸೆತಗಳನ್ನು ಎದುರಿಸಿದ ಜೆಮಿಮಾ ತಮ್ಮ T20 ವೃತ್ತಿಜೀವನದ ಅತಿದೊಡ್ಡ ಸ್ಕೋರ್ ಗಳಿಸಿದೆ. ಹರ್ಮನ್‌ಪ್ರೀತ್ ಕೌರ್ 33 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ರೋಡ್ರಿಗಸ್ ಆಕರ್ಷಕ 76 ರನ್ ಚಚ್ಚಿದರು. ಕೊನೆಯಲ್ಲಿ ಹೇಮಲತಾ ಅಜೇಯ 13 ರನ್ ಬಾರಿಸಿದರೆ, ರಿಚಾ ಘೋಷ್(9), ಪೂಜಾ ವಸ್ತ್ರಾಕರ್(1) ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಅಂತಿಮವಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ಕಲೆ ಹಾಕಿತು.

AICC ಅಧ್ಯಕ್ಷ ಚುನಾವಣೆ: ತ್ರಿಪಾಠಿ ನಾಮಪತ್ರ ತಿರಸ್ಕೃತ, ಖರ್ಗೆ Vs ತರೂರ್ ಫೈಟ್​

ಮತ್ತಷ್ಟು ಸುದ್ದಿಗಳು

vertical

Latest News

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...
- Advertisement -
error: Content is protected !!