Saturday, November 26, 2022

ಗಂಗಾನದಿಯಲ್ಲಿ ತೇಲಿ ಬಂದ ಪೆಟ್ಟಿಗೆಯೊಳಗಿತ್ತು ಅಚ್ಚರಿ

Follow Us

newsics.com

ವಾರಣಸಿ: ಪವಿತ್ರ ಗಂಗಾನದಿಯಲ್ಲಿ ತೇಲಿ ಬಂದ ಮರದ ಪೆಟ್ಟಿಗೆಯಲ್ಲಿ  ನವಜಾತ ಶಿಶು ಪತ್ತೆಯಾಗಿದೆ. 21 ದಿನ ಪ್ರಾಯವಾಗಿರುವ ಹೆಣ್ಣು ಮಗುವಿನ ಜತೆ ವಿಷ್ಣು ಮತ್ತು ದುರ್ಗಾ ದೇವಿಯ ಫೋಟೋ ಕೂಡ ಇದೆ. ಮಗುವಿನ ಜಾತಕ ಕೂಡ ಇಡಲಾಗಿದೆ.

ಈ ಎಲ್ಲ ವಸ್ತುಗಳನ್ನು ಮಗುವಿನ ಜತೆಯಲ್ಲಿ ಇರಿಸಿ ಮಗುವನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗಿದೆ.

ಇದೀಗ ಗಾಜಿಪುರದ ದಾದ್ರಿ ಘಾಟ್ ನಲ್ಲಿ ಪೆಟ್ಟಿಗೆಯಲ್ಲಿ ತೇಲಿ ಬಂದ ಮಗುವನ್ನು ರಕ್ಷಿಸಲಾಗಿದೆ. ಸ್ಥಳೀಯ ನಿವಾಸಿ ಗುಲ್ಲು ಎಂಬವರು ಮಗುವನ್ನು ರಕ್ಷಿಸಿದ್ದಾರೆ.

ಮಗು ದೊರೆತ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಗುವನ್ನು ಸಾಕಲು ನಾನು ಸಿದ್ದನಿದ್ದೇನೆ. ನನಗೆ ಮಗುವನ್ನು ನೀಡಿ ಎಂದು ಗುಲ್ಲು ಅರ್ಜಿ ಸಲ್ಲಿಸಿದ್ದಾರೆ.

55 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನಾರಾಯಣಮೂರ್ತಿ ಸಂಸ್ಥೆಗೆ ಸೂಚನೆ: ಬ್ರಿಟನ್ ನಲ್ಲಿ ಕೂಡ ವಿವಾದ

 

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!