ನವದೆಹಲಿ: ವಿಶ್ವದಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು, ಪ್ರಮುಖ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ಕಲ್ಪಿಸಿದೆ. ಈ ಸಾಲಿಗೆ ಈಗ ಅಮೆಜಾನ್ ಕೂಡ ಸೇರ್ಪಡೆಗೊಂಡಿದ್ದು, ಮುಂದಿನ ಜನವರಿವರೆಗೂ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ನೀಡಿದೆ.
ಈ ಮೊದಲು ಅಕ್ಟೋಬರ್ 2 ರವರೆಗೆ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದ ಅಮೆಜಾನ್, ಇದೀಗ 2021ರ ಜನವರಿ 8ರವರೆಗೆ ಮನೆಯಲ್ಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿದೆ.
ಅಮೆಜಾನ್ ವಿಶ್ವದಾದ್ಯಂತ ಒಟ್ಟು 8.4 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಸ್ಥಳೀಯ ಆಡಳಿತದ ಆದೇಶಕ್ಕೆ ಮಹತ್ವ ಕೊಡುವುದರ ಜತೆಗೆ ನಮ್ಮ ಉದ್ಯೋಗಿಗಳ ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅಮೆಜಾನ್ ಹೇಳಿದೆ.
ಜನವರಿ 8ರವರೆಗೂ ಅಮೆಜಾನ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ
Follow Us