ನವದೆಹಲಿ: ಇಲ್ಲಿನ ದೆಹಲಿ ಐಐಟಿ ವಿದ್ಯಾರ್ಥಿಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಕೋವಿಡ್-19 ಟೆಸ್ಟ್ ಕಿಟ್ ಆವಿಷ್ಕರಿಸಿದ್ದಾರೆ.
ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ (ಐಐಟಿ) ಅಭಿವೃದ್ಧಿಪಡಿಸಿದ ಕಡಿಮೆ ಬೆಲೆಯ ಕೋವಿಡ್ -19 ಪರೀಕ್ಷೆಯ ಕಿಟ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರ (ಎಚ್ಆರ್ಡಿ) ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ರಾಜ್ಯ ಸಚಿವ (ಎಚ್ಆರ್ಡಿ) ಸಂಜಯ್ ಧೋತ್ರೆ ಚಾಲನೆ ನೀಡಿದ್ದಾರೆ. ಪಿಸಿಆರ್ ಆಧಾರಿತ ಕೋವಿಡ್ -19 ಡಯಾಗ್ನೋಸ್ಟಿಕ್ ಕಿಟ್ ಕೊರೊಶೂರ್ ಎಂಬ ಪರೀಕ್ಷೆ ಇದಾಗಿದ್ದು, ವಿಶ್ವದ ಅತ್ಯಂತ ಕಡಿಮೆ ದರದಲ್ಲಿ ಇದರ ಸೌಲಭ್ಯ ಸಿಗಲಿದೆ ಅಂತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತನ್ನ ಟ್ವಿಟರ್ನಲ್ಲಿ ತಿಳಿಸಿದೆ.
ಕ್ಲಿನಿಕಲ್ ಟ್ರಯಲ್’ನ ಅಂತಿಮ ಹಂತದಲ್ಲಿ ಆಕ್ಸ್ಫರ್ಡ್ ವಿವಿ ಲಸಿಕೆ
ಇದು ಮೂರು ಗಂಟೆಗಳಲ್ಲಿ ಫಲಿತಾಂಶ ನೀಡುತ್ತದೆ. ಇದು ಈಗ ಅಧಿಕೃತ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಬಳಸಲು ಲಭ್ಯವಾಗಲಿದೆ. ಕೊರೊಶೂರ್ ಕಿಟ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ವಿಶ್ವದ ಅತ್ಯಂತ ಒಳ್ಳೆಯ ಕೋವಿಡ್-19 ಡಯಗ್ನೊಸ್ಟಿಕ್ ಕಿಟ್ ಎಂದು ಉಲ್ಲೇಖಿಸಿದ ಸಚಿವ ಪೋಖ್ರಿಯಾಲ್, ಈ ಆವಿಷ್ಕಾರವು “ಮೇಕ್ ಇನ್ ಇಂಡಿಯಾ” ದತ್ತ ಒಂದು ಹೆಜ್ಜೆಯಾಗಿದೆ ಎಂದರು.
ಕೊರೊಶೂರ್ನ ವ್ಯವಸ್ಥಾಪಕ ನಿರ್ದೇಶಕ ಜತಿನ್ ಗೋಯಲ್, ಕಿಟ್ ಸುಮಾರು 399 ರೂ.ಗಳಿಗೆ ದೊರೆಯಲಿದೆ ಎಂದು ತಿಳಿಸಿದ್ದಾರೆ. ಐಐಟಿ ದೆಹಲಿ ನಿರ್ದೇಶಕ ವಿ ರಾಮ್ಗೋಪಾಲ್ ರಾವ್ ಮಾತನಾಡಿ, ನ್ಯೂಟೆಕ್ ಮೆಡಿಕಲ್ ಡಿವೈಸಸ್ ಕಂಪನಿಯ ಈ ಕಿಟ್ನಿಂದ ತಿಂಗಳಿಗೆ ಎರಡು ಮಿಲಿಯನ್ ಪರೀಕ್ಷೆಗಳನ್ನು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.