ತ್ರಿಶೂರ್: ವಿಶ್ವದಲ್ಲೇ ಅತಿ ಉದ್ದದ ಕೇಕ್ ನಿರ್ಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ.
ತ್ರಿಶೂರ್ ನಲ್ಲಿ 12 ಸಾವಿರ ಕೆಜಿ ಸಕ್ಕರೆ, ಹಿಟ್ಟು ಬಳಸುವ ಮೂಲಕ 6.5 ಕಿಮೀ (ಸುಮಾರು ನಾಲ್ಕು ಮೈಲು) ಉದ್ದದ ಕೇಕ್ ತಯಾರಿಸಲಾಗಿದೆ. ನಾಲ್ಕು ಇಂಚು(10 ಸೆಂಟಿ ಮೀಟರ್) ಅಗಲವಿರುವ ಈ ಕೇಕ್ ನ ತೂಕ ಬರೋಬ್ಬರಿ 28 ಸಾವಿರ ಕೆಜಿಗಳಷ್ಟಿದೆ. 1500 ಬೇಕರ್ಸ್ ಸತತ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಿ ವಿಶ್ವದಾಖಲೆ ಕೇಕ್ ತಯಾರಿಸಿದ್ದಾರೆ.
ಚೀನಾದ ಬಾಣಸಿಗರು ಈ ಹಿಂದೆ 3.2 ಕಿಮೀ ದೂರದ ಕೇಕ್ ತಯಾರಿಸಿದ್ದೇ ದಾಖಲೆಯಾಗಿತ್ತು.
ಕೇರಳದಲ್ಲಿ ವಿಶ್ವದಲ್ಲೇ ಅತಿ ಉದ್ದದ ಕೇಕ್!
Follow Us